ವಾಲ್ಮೀಕಿ ಜಯಂತಿಯನ್ನು ಕರ್ನಾಟಕದದ್ಯಂತ ಆಚರಿಸುವುದು ಸಂಭ್ರಮದ ವಿಷಯ. ರಾಮಾಯಣ ಕೇವಲ ಒಂದು ಧರ್ಮ ಗ್ರಂಥ ಮಾತ್ರವಲ್ಲ ಪ್ರಜಾಪ್ರಭುತ್ವ, ಜನಪ್ರತಿನಿಧಿಗಳು, ಅಧಿಕಾರಿಗಳು ಯಾವ ರೀತಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದನ್ನ ವಾಲ್ಮೀಕಿ ಮಹರ್ಷಿಗಳು ಅವತ್ತೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಮೂಲಕ ತಿಳಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾಮಾಯಣವನ್ನು ಅನುಸರಿಸಿ, ಅಳವಡಿಸಿಕೊಂಡು ಜೀವನ ಮಾಡಬೇಕು ಎಂದು ತರೀಕೆರೆ ಪುರಸಭೆ ಸದಸ್ಯ ದಾದಾಪೀರ್ ತಿಳಿಸಿದರು.