ಕುರಿಗೆ ನೀರು ಕುಡಿಸಲು ಹೋಗಿ ಕುರಿಗಾಹಿ ಯುವಕನೊಬ್ಬ ಕಾಲು ಜಾರಿ ಭದ್ರಾ ನದಿಯ ಕಾಲುವೆಗೆ ಬಿದ್ದಿದ್ದು ನಾಪತ್ತೆಯಾಗಿರುವ ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪ ಭದ್ರಾ ನಾಲೆಯಲ್ಲಿ ಯುವಕ ಕಾಲು ಜಾರಿ ಬಿದ್ದಿದ್ದಾನೆ ಎಂಬ ಮಾಹಿತಿಯ ಮೇರೆಗೆ ಶೋಧಕಾರ್ಯ ನಡೆಸಲಾಗುತ್ತಿದೆ.