ಹನೂರು :ತಾಲ್ಲೂಕಿನ ನಾಲ್‌ರೋಡ್ ಹೊರವಲಯದ ಬರಗೂರು ರಸ್ತೆಯಲ್ಲಿ ಸಂಭವಿಸಿದ ಬೈಕ್ ಹಾಗೂ ಲಾರಿ ನಡುವೆ ಅಪಘಾತದಲ್ಲಿ, ಯುವ ರೈತ ಮತ್ತು ರೈತ ಸಂಘಟನೆಯ ಯುವ ಘಟಕದ ಅಧ್ಯಕ್ಷ ತೀವ್ರ ಗಾಯವಾಗಿರುವ ದುರ್ಘಟನೆ ನಡೆದಿದೆ. ಪುದುರಾಮಪುರ ಗ್ರಾಮದ ನಿವಾಸಿ ಹಾಗೂ ರೈತ ಸಂಘಟನೆಯ ಯುವ ಘಟಕದ ಅಧ್ಯಕ್ಷನಾದ 25 ವರ್ಷದ ಸೂರ್ಯ ಎಂಬ ಯುವಕನಾಗಿದ್ದು, ಈತ ತನ್ನ ಜಮೀನಿನಲ್ಲಿ ಬೆಳೆದ ಈರುಳ್ಳಿ ಫಸಲನ್ನು ತಮಿಳುನಾಡಿನ ಮಾರುಕಟ್ಟೆಗೆ ಸಾಗಿಸಲು ಗೂಡ್ಸ್ ವಾಹನದಲ್ಲಿ ತುಂಬಿಸಿದ್ದ. ಬಳಿಕ, ಅದೇ ಗೂಡ್ಸ್ ವಾಹನದ ಹಿಂಭಾಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.