ಮದುವೆ ಸಮಾರಂಭಗಳ ಸಂದರ್ಭದಲ್ಲಿ ಕಲ್ಯಾಣ ಮಂಟಪ, ಕನ್ವೆನ್ಷನ್ ಸೆಂಟರ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನ ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಪರಮೇಶ್ ಬಂಧಿತ ಆರೋಪಿ. ಆತನಿಂದ 400 ಗ್ರಾಂ ಚಿನ್ನಾಭರಣ,91 ಸಾವಿರ ನಗದು ಸಹಿತ ಒಟ್ಟು ಮೌಲ್ಯ 36.91 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಆಗಸ್ಟ್ 26ರಂದು ಮಧ್ಯಾಹ್ನ 12 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, ಕಲ್ಯಾಣಮಂಟಪ, ಕನ್ವೆನ್ಷನ್ ಸೆಂಟರ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಮದುವೆ ಸಮಾರಂಭಗಳಿಗೆ ಅತಿಥಿಯ ಸೋಗಿನಲ್ಲಿ ತೆರಳುತ್ತಿದ್ದ ಎಂದು ವಿವರಿಸಿದರು