ಕಲಬುರಗಿ : ಕಟ್ಟರ ಹಿಂದೂತ್ವವಾದಿ ಶ್ರೀ ಬಾಳಸಾಹೇಬ ಠಾಕ್ರೆ ಸಂಸ್ಥಾಪಿಸಿದ್ದ ಹಾಗೂ ಏಕನಾಥ ಶಿಂಧೆ ಸಾರಥ್ಯದ ಶಿವಸೇನೆ ಸಂಘಟನೆಯ ಕರ್ನಾಟಕ ರಾಜ್ಯಾದ್ಯಕ್ಷರಾಗಿ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನ ನೇಮಕ ಮಾಡಲಾಗಿದೆ.. ಆಗಷ್ಟ್ 26 ರಂದು ಮಧ್ಯಾನ 1 ಗಂಟೆಗೆ ಮುಂಬಯಿನ ಬಾಳಸಾಹೇಬ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕ್‌ನಾಥ್ ಶಿಂಧೆ ಅವರು ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶಿವಸೇನೆ ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರೋ ನೇಮಕಾತಿ ಪತ್ರ ನೀಡಿದ್ದಾರೆ.