ಹಿಂದೂಗಳ ಹಬ್ಬವನ್ನು ಹತ್ತಿಕ್ಕುತ್ತಿರುವ ನಗರದ ಸೆಂಟ್‌ಜೋನ್ಸ್ ಹಾಗೂ ಲೋಯಲಾ ಕಾನ್ವೆಂಟಗಳು ಸರಕಾರಿ ರಜೆ ಘೋಷಣೆ ಮಾಡಿದಾಗಲೂ ಹಿಂದೂ ಮಕ್ಕಳಿಗೆ ಹಿಂದೂ ಧಾರ್ಮಿಕ ಭಾವನೆಯಿಂದ ವಂಚಿತರಾಗಿಸಲು ವಿದ್ಯಾರ್ಥಿಗಳಿಗೆ ರಜೆ ಘೋಷಿಸದಿರುವುದನ್ನು ಪ್ರಶ್ನಿಸಲು ಹೋದಾಗ ಕಾನ್ವೆಂಟ್‌ಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೆಂಡ್ಕರ್ ಭಾವಚಿತ್ರವನ್ನು ಅಳವಡಿಸದಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರಿಗೆ ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಿರುವ ಕಾನ್ವೆಂಟ್‌ಗಳ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಶಿವ ರಾಮಕೃಷ್ಣ ಸೇವಾ ಸಮಿತಿಯಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.