ಬೀಳಗಿ ಮಾಜಿ ಶಾಸಕ ಮುರುಗೇಶ್ ನಿರಾಣಿ ಹಾಗೂ ಹಾಲಿ ಶಾಸಕ ಜೆಟಿ ಪಾಟೀಲ್ ಮಧ್ಯೆ ಟಾಕ್ ವಾರ್ ಮುಂದುವರೆದಿದೆ.ಜೆಟಿ ಪಾಟಿಲ್ ವಿರುದ್ಧ ಭ್ರಷ್ಟಾಚಾರ ಆರೋಪ ಹಾಗೂ ರಾಜೀನಾಮೆ ಕೊಟ್ಟು ಬನ್ನಿ ಚುನಾವಣೆಗೆ ಎಂದಿದ್ದ ನಿರಾಣಿ ಅವರ ಸವಾಲಿಗೆ ಶಾಸಕ ಜೆಟಿ ಪಾಟಿಲ್ ತಿರುಗೇಟು ನೀಡಿದ್ದಾರೆ.ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ನನಗೆ ಮುರುಗೇಶ್ ನಿರಾಣಿ ಭ್ರಷ್ಟ ಶಾಸಕ ಅಂತ ಕರೆದಿದ್ದಾರಲ್ಲ.ಅವರು ಭ್ರಷ್ಟ ಮುಂತ್ರಿಯಾಗಿದ್ದವರು.ಅವರು ರಾಜ್ಯದಲ್ಲಿ ಭ್ರಷ್ಟ ಮಂತ್ರಿ. ಅವರು ಏನು ಗಾಳಿಯೊಳಗೆ ಗುಂಡು ಹೊಡೆದಿದ್ದಾರೆ.ನನಗೆ ಚುನಾವಣೆ ಸವಾಲು ಹಾಕಿದಾರೆ.ರಾಜೀನಾಮೆ ಕೊಟ್ಟು ಬನ್ನಿ ಅಂತ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.