Download Now Banner

This browser does not support the video element.

ಬೆಂಗಳೂರು ಉತ್ತರ: ಡೆವಿಲ್ ಚಿತ್ರದ 'ಇದ್ರೆ‌ ನೆಮ್ದಿಯಾಗಿರ್ ಬೇಕ್' ಹಾಡಿಗೆ ನಗರದಲ್ಲಿ ಸ್ಟೆಪ್ಸ್ ಹಾಕಿದ ನಟ ವಿನೋದ್ ರಾಜ್

Bengaluru North, Bengaluru Urban | Aug 25, 2025
ನಟ ದರ್ಶನ್ ತೂಗುದೀಪ​ ಮುಖ್ಯಭೂಮಿಕೆಯ 'ದಿ ಡೆವಿಲ್'​​ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ನಾಯಕ ನಟ ಕೊಲೆ ಪ್ರಕರಣದ ಆರೋಪದಲ್ಲಿ ಸಿಲುಕಿ ಜೈಲು ಸೇರಿರುವ ಹಿನ್ನೆಲೆ, ಚಿತ್ರತಂಡ ಪ್ರಚಾರ ಕೈಗೆತ್ತಿಕೊಂಡಿದೆ. ಪ್ರಮೋಷನ್​ ಭಾಗವಾಗಿ ಭಾನುವಾರವಷ್ಟೇ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ವಿಶೇಷವೆಂದರೆ, ಇದೇ ಚಿತ್ರದ ಹಾಡಿಗೆ ನಟ ವಿನೋದ್ ರಾಜ್ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಸೋಮವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ‌ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಅಂದಹಾಗೆ ಈ ಹಾಡು ರಿಲೀಸ್​ ಆದ 24 ಗಂಟೆಯೊಳಗೆ ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದರೆ, 5 ಲಕ್ಷ ಸನಿಹ ಲೈಕ್ಸ್​​ ಸಿಕ್ಕಿದೆ. ಅಂದಹಾಗೆ ಈ ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ.
Read More News
T & CPrivacy PolicyContact Us