ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗುವ ದೃಶ್ಯಗಳು ಧಾರವಾಡ ನಗರದಾದ್ಯಂತ ಕಂಡುಬಂದವು. ಬುಧವಾರ ಗಂಟೆಗೆ ಧಾರವಾಡದ ಗಾಂಧಿ ಚೌಕ್, ದತ್ತಾತ್ರೇಯ ಮಂದಿರ, ಹೊಸ ಯಲ್ಲಾಪುರ, ಕುಮಾರೇಶ್ವರ ನಗರ, ಕೊಪ್ಪದಕೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸದರು.