ಗೌರಿ ಗಣೇಶ ಹಬ್ಬದ ಅಂಗವಾಗಿ ವಾರ್ಡ್ ನಂಬರ್ 45ರ ಆನಂದ್ ನಗರದಲ್ಲಿರುವ ಮಾಜಿನಗರ ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್ ಹಾಗೂ ಅವರ ಪತಿ ಹರೀಶ್ ರವರು ಪೌರಕಾರ್ಮಿಕರನ್ನು ಮನೆಗೆ ಕರೆಸಿ ಕುಂಕುಮ, ಅರಿಶಿಣ ಬಳೆ ಸೀರೆ ನೀಡುವ ಮೂಲಕ ಬಾಗಿನ ನೀಡಿ ಸತ್ಕರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿನಗರ ಪಾಲಿಕೆ ಸದಸ್ಯೆ ನಿರ್ಮಲ ಹರೀಶ್ ನಾವು ಪೌರಕಾರ್ಮಿಕರನ್ನು ನಮ್ಮ ಸ್ವಂತ ಸಹೋದರಿ ಸಹೋದರ ರಂತೆ ಕಾಣುತ್ತೇವೆ ಪ್ರತಿಯೊಂದು ಹಬ್ಬವನ್ನು ಸಹ ಅವರ ಜೊತೆಯಲ್ಲೇ ವಿಶೇಷವಾಗಿ ಆಚರಿಸುತ್ತಾ ಬಂದಿದ್ದೇವೆ, ನಮ್ಮ ಮೈಸೂರು ಸುಂದರವಾಗಲು ಅವರ ಪರಿಶ್ರಮ ಹೆಚ್ಚು, ಅವರೊಡನೆ ನಾವು ಇರುತ್ತೇವೆ ಎಂದು ಹೇಳಿದರು