ಕೊಳ್ಳೇಗಾಲ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಬೈಕ್ ಡಿಕ್ಕಿಯಾಗಿ ಸವಾರ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಚೆಲುವನಹಳ್ಳಿ ಗ್ರಾಮದ ಚಿಕ್ಕಬಸವಣ್ಣ, ರೇವಮ್ಮ, ಬೇಬಿಯಮ್ಮ, ಬೈಕ್ ಸವಾರ ರಮೇಶ್ ಗಾಯಗೊಂಡವರು. ಮೈಸೂರಿನಲ್ಲಿ ಸಂಬಂಧಿಕರ ಮದುವೆ ಕಾರ್ಯ ಮುಗಿಸಿಕೊಂಡು ಸರಗೂರಿನ ಬಳಿ ಬಸ್ಸನಿಂದಿಳಿದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದಾಗ ಹನೂರು ಕಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ.