ಬೀದರ್: ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭಂಗೂರ, ಸಿಂದೋಲ ಮಧ್ಯದ ಸೇತುವೆಗೆ ಮಳೆಯಿಂದ ಹಾನಿಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಡಾ: ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸದಾಗಿ ನಿರ್ಮಿಸಿರುವ ಸೇತುವೆ ಕೆಳ ಭಾಗದಲ್ಲಿ ತೆರವುಗೊಳಿಸಿದ ಹಳೆಯ ಸೇತುವೆಯ ಕಲ್ಲು ಮಣ್ಣು ಶೇಖರಣೆಗೊಂಡ ಪ್ರಯುಕ್ತ ಮಳೆ ನೀರಿನ ಒಳ ಹರಿವು ಹೆಚ್ಚಾಗಿ ಸೇತುವೆ ಮೇಲಿಂದ ನೀರು ಹರಿಯುತ್ತಿದೆ ಮಳೆ ನೀರು ಕಡಿಮೆಯಾದ ತಕ್ಷಣ ಸೇತುವೆ ಕೆಳ ಭಾಗದಲ್ಲಿ ಸ್ವಚ್ಛತೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.