ನಗರದ ಹುಕ್ಕೇರಿಮಠದಲ್ಲಿ ಭಾನುವಾರ ನಡೆದ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿ ಕಾರಿಗಳ ಸಭೆಯಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜುಗಳ ರೀತಿಯಲ್ಲಿ ಜಿಲ್ಲೆಯ ಎಲ್ಲಾ ಅನುದಾನಿತ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳನ್ನು ತುಂಬಲು ಸರಕಾರ ಕ್ರಮಕೈಗೊಳ್ಳಬೇಕೆಂಬ ಆಗ್ರಹವನ್ನು ಮಾಡಲಾಯಿತು. ಅನುದಾನಿತ ಶಾಲಾ ಕಾಲೇಜುಗಳಲ್ಲಿ 2015 ರಿಂದ 2020ರ ವರೆಗೆ ನಿಧನ, ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳನ್ನು ತುಂಬಲು ಸರಕಾರದ ಆದೇಶವಾಗಿದ್ದರೂ ಕೂಡ ಒಳಮೀಸಲಾತಿ ಕಾರಣದಿಂದ ಕಳೆದ 8-10 ತಿಂಗಳಿಂದ ನೇಮಕಾತಿ ಪ್ರಕ್ರಿಯೆ ನಿಂತು ಹೋಗಿತ್ತು. ಈಗ ಸರಕಾರ ಒಳಮೀಸಲಾತಿ ನಿಗದಿಯಾಗಿ ಹುದ್ದೆ ತುಂಬಲು ಆದೇಶ ಮಾಡಿ 3 ತಿಂಗಳೊಳಗಾಗಿ ನೇಮಕಾತಿ ಪ್ರಕ್ರಿಯೆ ಮುಗಿಸಲು ಅದೇಶ ಮಾಡಿದೆ.