ಮದ್ದೂರು ಗಲಭೆ, ಕೈ ನಾಯಕರ ವಿರುದ್ಧ ಸಂಸದ ಯದುವೀರ್ ಬೇಸರ ವ್ಯಕ್ತ ಪಡಿಸಿದರು. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಶಾಸಕರ ಬಗ್ಗೆಯೂ ಪ್ರಶ್ನೆ ಎದ್ದಿದ್ದು, ಜನರ ನೋವನ್ನು ಅರಿಯಲು ಸಕರ್ಾರ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಿಡಿಗೇಡಿಗಳು ಎಲ್ಲಿಯೇ ಇದ್ದರೂ ಧರ್ಮ ರಕ್ಷಣೆಗೆ ಬಿಜೆಪಿ ಸದಾ ಸಿದ್ದ ಎಂದು ಯದುವೀರ್ ಒಡೆಯರ್ ಅವರು ಹೇಳಿದ್ದಾರೆ.