ನಗರದಲ್ಲಿ ಬುಧವಾರ ಸಂಜೆ 6ಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಪ್ರಕಟಣೆ ನೀಡಿದ್ದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷಾ ಕಾರ್ಯವು ಸೆ.22 ರಿಂದ ಅ.7ರ ವರೆಗೆ ನಡೆಯಲ್ಲಿದ್ದು,ಈ ಸಮೀಕ್ಷೆ ಕಾರ್ಯಕ್ಕೆ ಆಧಾರ ಲಿಂಕ್ಸ್ ಮೋಬೈಲ್ ನಂಬರ್ ಕಡ್ಡಾಯವಾಗಿರುವ ಕಾರಣ, ಜಿಲ್ಲೆಯ ಸಾರ್ವಜನಿಕರು ತಮ್ಮ ಚಾಲ್ತಿ ಇರುವ ಮೊಬೈಲ್ ನಂಬರ್ನ್ನು ಆಧಾರ ಕಾರ್ಡಗೆ ಲಿಂಕ್ / ಅಪಡೇಟ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ