ಹಾವೇರಿ ತಾಲೂಕಿನ ಹೊಸರಿತ್ತಿಯ ಜಿವಿ ಹಳ್ಳಿಕೇರಿ ಸಂಯುಕ್ತ ಪ್ರೌಢಶಾಲೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರು ವಂದನೆ ಶಾಲೆಯ ಆವರಣದಲ್ಲಿ ಭಾನುವಾರ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರೌಢಶಾಲೆ ಮುಗಿದ ನಂತರ ಬಹುತೇಕ ಸಂಪರ್ಕ ಕಳೆದುಕೊಂಡಿದ್ದ ಸ್ನೇಹಿತರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೂರು ದಶಕಗಳ ನಂತರ ಒಂದೆಡೆ ಸೇರಿದ ಸ್ನೇಹಿತರೆಲ್ಲಾ ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದರು. ಒಟ್ಟು 80 ವಿದ್ಯಾರ್ಥಿಗಳಿದ್ದ ಬ್ಯಾಚ್‌ನಲ್ಲಿ ಬಹುತೇಕರು ಪಾಲ್ಗೊಂಡಿದ್ದರು ಜೊತೆಗೆ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರೆಲ್ಲಾ ಸೇರಿದ್ದು ವಿಶೇಷವಾಗಿತ್ತು.