ಕಲಬುರಗಿ : ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಕಲಬುರಗಿ ನಗರದ ಕಿರು ಮೃಗಾಲಯಕ್ಕೆ ನೀರು ನುಗ್ಗಿ ಪ್ರಾಣಿಗಳು ಪರದಾಟ ನಡೆಸಿದ ಘಟನೆ ನಡೆದಿದೆ.. ಸೆ11 ರಂದು ಮಧ್ಯಾನ 12.30 ಕ್ಕೆ ಮೃಗಾಲಯಕ್ಕೆ ಭೇಟಿ ಕೊಟ್ಟ ವೇಳೆ, ಮಳೆ ನೀರು ಇಡೀ ಪ್ರಾಣಿ ಸಂಗ್ರಹಾಲಯ ಜಲಾವೃತವಾಗಿದ್ದು, ಪ್ರಾಣಿಗಳ ಬೋನಿಗೆ ಮಳೆ ನೀರು ನುಗ್ಗಿ ಜಿಂಕೆ, ನವಿಲು, ಮಂಗಗಳು, ಮೊಸಳೆ ಸೇರಿದಂತೆ ಇನ್ನಿತರ ಪ್ರಾಣಿಗಳು ತತ್ತರಿಸಿ ಹೋಗಿವೆ. ಇನ್ನೂ ಪ್ರಾಣಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಮೃಗಾಲಯ ಸಿಬ್ಬಂದಿಗಳು ಮುಂದಾಗಿದ್ದಾರೆ..