ಶಿರಸಿ ತಾಲೂಕಿನ ದನಗನಹಳ್ಳಿಯ ರೈತ ವಿಜಯ ದಳವಿ ಅವರು ಸುಮಾರು 100 ಕ್ವಿಂಟಾಲ್ ನಷ್ಟು ಜೋಳದ ಬೆಳೆ ಒಣಗಿಸಲು ಹಾಕಿದ್ದದರು. ಭಾರಿ ಮಳೆಗೆ ಜೋಳ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಮಂಗಳವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಇದರಿಂದ ರೈತರ ವಿಜಯ ಅವರಿಗೆ ಸುಮಾರು ಎರಡು ಲಕ್ಷ ರೂ. ಹಾನಿಯಾಗಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ವಿವಿಧ ಕಡೆಗಳಲ್ಲಿ ಮಳೆ ನೀರು ತುಂಬಿದೆ. ಇದರಿಂದ ಕೃಷಿ ಕ್ಷೇತ್ರಕ್ಕೂ ತೊಂದರೆಯಾಗಿದ್ದು ರೈತರು ಹಾನಿ ಅನುಭವಿಸುವಂತಾಗಿದೆ.