ಖಾಸಗಿ ಕಾಲೇಜಿಂದರ ಪ್ರಥಮ ಪಿಯುಸಿ ವಿದ್ಯಾರ್ಥಿ, ಹೆಮ್ಮಾಡಿಯ ನಮೇಶ್ 17 ವರುಷ ಮೃತ ವಿದ್ಯಾರ್ಥಿ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಮರಳದೆ ನಾಪತ್ತೆಯಾಗಿದ್ದು ಇಂದು ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಾಲೇಜ್ ಬಿಟ್ಟ ಬಳಿಕ ನವೇಶ್ ಮನೆಗೆ ವಾಪಸ್ ಆಗಿರಲಿಲ್ಲ ಇತ್ತೀಚಿಗಷ್ಟೇ ತಂದೆ ಕೊಡಿಸಿದ ಐಫೋನ್ ಮೊಬೈಲನ್ನು ಮನೆಯಲ್ಲಿ ಬಿಟ್ಟು ಬೈಕ್ ನಲ್ಲಿ ತೆರಳಿದ ನವೇಶ್ ಹೆಮ್ಮಾಡಿ ಸಮೇಪದ ಕನ್ನಡ ಕುದ್ರು ನದಿ ತೀರದಲ್ಲಿ ಬೈಕ್ ಹಾಗೂ ತನ್ನ ಕಾಲೇಜ್ ಬ್ಯಾಗನ್ನು ಬಿಟ್ಟು ನಾಪತ್ತೆಯಾಗಿದ್ದನು ಎಂದು ತಿಳಿದು ಬಂದಿದೆ.