ಶಿರಹಟ್ಟಿ ಮತಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ಅವುಗಳನ್ನು ದುರಸ್ತಿಗೊಳಿಸಬೇಕು. ನಾವು ಹಳ್ಳಿಗಳಿಗೆ ಹೋಗಲು ಹರಸಾಹಸ ಪಡಬೇಕಾಗುತ್ತದೆ. ರಸ್ತೆ ದುರಸ್ತಿ ಪಡಿಸಿ ಅಂತ ಸಾರ್ವಜನಿಕರು ನಮಗೆ ಒತ್ತಾಯ ಮಾಡುತ್ತಾರೆ. ಆದರೆ, ನಮ್ಮ ಬಳಿಯ ಹಣವಿಲ್ಲ. ಸರ್ಕಾರ ಅನುದಾನ ನೀಡುತ್ತಿಲ್ಲ. ತಾಲೂಕಿನಾಧ್ಯಂತ ಮಳೆಯಿಂದಾಗಿ ಕಿರು ಸೇತುವೆಗಳು ದುರಸ್ತಿಯಲ್ಲಿವೆ. ಸೇತುವೆ ದುರಸ್ತಿಗೊಳಿಸಲು ಕೂಡ ಸರ್ಕಾರ ಹಣ ನೀಡುತ್ತಿಲ್ಲ ಅಂತ ಸಭಾಧ್ಯಕ್ಷರ ಮುಂದೆ ಶಾಸಕ ಡಾ. ಚಂದ್ರು ಲಮಾಣಿ ತಮ್ಮ ಅಳಲು ತೋಡಿಕೊಂಡರು.