ಜೋಯಿಡಾ : ಅದು ದಟ್ಟ ಅರಣ್ಯದ ನಡುವೆ ಇರುವ ಸುಂದರ ಪ್ರದೇಶ. ಕಳೆದ ಮೂರು ವರ್ಷಗಳ ಹಿಂದಿನವರೆಗೆ ಇಲ್ಲಿ ಒಂದು ದಿನವೂ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಇಲ್ಲಿಯ ಜನತೆಗೆ ಶುದ್ಧ ಕುಡಿಯುವ ನೀರು ಸಿಗದೇ ನೀರಿಗಾಗಿ ಒಂದೆರಡು ಕಿ.ಮೀ ದೂರಕ್ಕೆ ಸಾಗಿ ತರುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿಯೂ ನೀರಿಗಾಗಿ ಸಮಸ್ಯೆ ಎದುರಿಸುತ್ತಿರುವ ಭವ್ಯ ಭಾರತದ ಏಕೈಕ ಪ್ರದೇಶ ಅಂದರೆ ಇದು ಎನ್ನಲು ಅಡ್ಡಿ ಇಲ್ಲ. ಪ್ರಧಾನಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹತ್ತನ್ನೆರಡು ಮನೆಗಳನ್ನು ಹೊಂದಿರುವ ಮಜಿರೆಯೆ ಉಸೇಲಿ. ಇಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.