ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ದಿನ ಅಧಿಕಾರಿ ಸಿಬ್ಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ದೈನಂದಿನ ಕರ್ತವ್ಯದೊಂದಿಗೆ ನಗರದಲ್ಲಿ ಸೋಮವಾರವಿಷೇಶ ಗಸ್ತು ಕರ್ತವ್ಯವನ್ನು ಕೈಗೊಂಡು ಪ್ರಮುಖ ಸಾರ್ವಜನಿಕ ಸ್ಥಳಗಲಾದ ದೇವಸ್ಥಾನ, ಮಸೀದಿ, ಬಸ್ ನಿಲ್ದಾಣ, ಲಾಡ್ಜ್ ಗಳಿಗೆ ಭೇಟಿ ನೀಡಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ATM, ಮತ್ತು ವಾಹನಗಳನ್ನು ಪರಿಶೀಲಿಸಿ ಸೋಮವಾರ ಕಾನೂನು ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಹಲವೆಡೆ ದಿನನಿತ್ಯದ ಗಸ್ತು ಕರ್ತವ್ಯದ ಜೊತೆಗೆ, ಹೆಚ್ಚುವರಿಯಾಗಿ ಅಧಿಕಾರಿ ಸಿಬ್ಬಂದಿಗಳು ವಿಶೇಷ ಗಸ್ತು ಕರ್ತವ್ಯವನ್ನು ಕೈಗೊಂಡು,ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಸಂಶಯಾಸ್ಪದ ವ್ಯಕ್ತಿಗಳನ್ನು ಹಾಗೂ ATM, ಹಾಗೂ ವಾಹನಗಳನ್ನು ಪರಿಶೀಲಿಸಲಾಗಿದೆ