ಬಹುದಿನಗಳಿಂದ ಜನರು ಬೇಡಿಕೆ ಇಟ್ಟುಕೊಂಡಿದ್ದ ಕಂಪ್ಲಿ–ಮುದ್ದಾಪುರ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಜೆ.ಎನ್. ಗಣೇಶ್ ರವರು ಸೆಪ್ಟೆಂಬರ್ 2, ಮಂಗಳವಾರ ಮಧ್ಯಾಹ್ನ 12ಗಂಟೆಗೆ ಭೂಮಿ ಪೂಜೆ ನೆರವೇರಿಸಿದರು.ಕಂಪ್ಲಿ ನಗರದ ಹೊಸ ಬಸ್ ನಿಲ್ದಾಣದಿಂದ ಮಾರುತಿ ನಗರ ಮಾರ್ಗವಾಗಿ ಮುದ್ದಾಪುರ, ರಾಮಸಾಗರ ಕ್ರಾಸ್‌ವರೆಗಿನ ರಸ್ತೆ ವರ್ಷಗಳಿಂದ ಹದಗೆಟ್ಟಿದ್ದು, ದುರಸ್ತಿ ಮಾಡಲು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಗಣೇಶ್, “ಈ ರಸ್ತೆ ಅಭಿವೃದ್ಧಿಯಿಂದ ಜನರ ಸಂಚಾರ ಸುಗಮವಾಗಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವೆ ಸಂಪರ್ಕ ಸುಲಭವಾಗುವುದು. ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದೇನೆ” ಎಂದ