ಕಲಬುರಗಿ : ಹಜಾಮ್ ಪದ ಬಳಸಬಾರದು ಅಂತಾ ಸರ್ಕಾರವೇ ನಿಷೇಧಿಸಿ ಆದೇಶ ಹೊರಡಿಸಿದೆ.. ಆದರೂ ಪ್ರಸ್ತುತ ನಡೆಯುತ್ತಿರೋ ಜಾತಿ ಸಮೀಕ್ಷೆಯಲ್ಲಿ ಹಜಾಮ್ ಪದ ಬಳಸಲಾಗುತಿದ್ದು, ಇದು ನಮ್ಮ ಸಮಾಜಕ್ಕೆ ಮಾಡ್ತಿರೋ ಘೋರ ಅಪಮಾನ ಅಂತಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸೆ8 ರಂದು ಬೆಳಗ್ಗೆ 10.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಷೇಧಿತ ಹಜಾಮ್ ಪದ ತೆಗೆದು ಹಾಕುವಂತೆ ಮನವಿ ಸಲ್ಲಿಸಿದರು ಸಹ ಆಯೋಗ ನಿರ್ಲಕ್ಷ್ಯ ವಹಿಸಿದೆ ಅಂತಾ ಆನಂದ ವಾರಿಕ್ ಕಿಡಿಕಾರಿದ್ದಾರೆ.