ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಚಲನಚಿತ್ರ ನಿರ್ದೇಶಕ, ನಟ ಟಿ ಎಸ್ ನಾಗಾಭರಣ ಉದ್ಘಾಟಿಸಲಿದ್ದಾರೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆ.25 ರಿಂದ 28ರವರೆಗೆ ನಡೆಯುವ ದಸರಾ ಮಹೋತ್ಸವದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ದಸರಾ ಮಹೋತ್ಸವ ಉದ್ಘಾಟಕರ ಹೆಸರನ್ನು ಘೋಷಿಸಿದರು. ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಟ ಟಿ.ಎಸ್ ನಾಗಾಭರಣ ಉದ್ಘಾಟಿಸಲ್ಲಿದ್ದಾರೆ ಎಂದು ತಿಳಿಸಿದರು. ಈ ಬಾರಿಯ ದಸರಾ ಉತ್ಸವವನ್ನು ಉತ್ತಮವಾಗಿ ಸಂಘಟಿಸಲಾಗುವುದು. ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸೆ. 25 ರಂದು ಉದ್ಘಾಟನೆ ಹಾಗೂ 28 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.