ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಸಮೀಪ 2 ಬೈಕ್ ಗಳ ನಡುವೆ ಇಂದು ಬೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಾಲಸುಬ್ರಮಣಿ ಮತ್ತು ಶಶಿಕಿರಣ್ ಎಂಬ ವಿದ್ಯಾರ್ಥಿಗಳು ಇಬ್ಬರು ಮುದ್ದೇನಹಳ್ಳಿ ಸಮೀಪದ ವಿಟಿಯು ಕಾಲೇಜಿಗೆ ಹೋಗುತ್ತಿದ್ದಾಗ ಹಾಗೂ ಅವರಿಗೆ ಎದುರುಗಡೆ ತೇಜಸ್ ಎಂಬಾತ ಕೆಲಸಕ್ಕೆ ಸಮಯವಾಗಿದೆ ಎಂದು ಚಿಕ್ಕಬಳ್ಳಾಪುರ ಕಡೆ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ವಿದ್ಯಾರ್ಥಿ ಬಾಲಸುಬ್ರಮಣಿಗೆ ಮತ್ತು ತೇಜಸ್ ರವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.