ಒಳ ಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರಕಾರ ಅಲೆಮಾರಿ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕೂಡಲೇ 49 ಅಲೆಮಾರಿ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಶೇ.1%ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಹಾವೇರಿ ಜಿಲ್ಲಾ ಅಲೆಮಾರಿ ಸಮುದಾಯದ ಮುಖಂಡರುಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಆರಂಭಕ್ಕೂ ಮುನ್ನ ಗಣೇಶ ದೇವಸ್ಥಾನ ಬಳಿ ಸೇರಿದ್ದ ಅಲೆಮಾರಿ ಸಮುದಾಯದವರು, ಸುಡಗಾಡು ಸಿದ್ದರು, ವೇಷಗಾರರು, ಭಿಕ್ಷಾಟನೆ ವೇಷಭೂಷಣ ತೊಟ್ಟು ಗಮನಸೆಳೆದರು. ತಟ್ಟೆ, ಲೋಟ, ಚರಗಿ ಸಹಿತ ಬಂದಿದ್ದ ಪ್ರತಿಭಟನಾಕಾರರು ತಟ್ಟೆ ಗಂಟೆ ಬಾರಿಸಿ ಶಂಕು ಊದುವ ಮೂಲಕ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು.