ಚಳ್ಳಕೆರೆ:- ನಾಳೆ ಮಧ್ಯ ಕರ್ನಾಟಕದ ಪ್ರಸಿದ್ಧವಾದ ಗೌರಸಮುದ್ರ ಜಾತ್ರೆ ಆರಂಭವಾಗಲಿದೆ.ಜಾತ್ರೆಯ ಪ್ರಯುಕ್ತವಾಗಿ ನಾಳೆ ಲಕ್ಷಾಂತರ ಮಂದಿ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಭಂಡಾರು ಸೋಮವಾರ ಸಂಜೆ 5:00 ಗಂಟೆಗೆ ಜಾತ್ರೆ ನಡೆಯುವ ಸ್ಥಳಕ್ಕೆ ವಾಹನಗಳ ಪಾರ್ಕಿಂಗ್ ಸ್ಥಳಗಳು ಹಾಗೂ ಮಾರಮ್ಮ ದೇವಸ್ಥಾನದ ಸಿಡಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಕ್ರಮಗಳ ಬಗ್ಗೆ ಪರಿಶೀಲಿಸಿದರು.