ಚಿತ್ರದುರ್ಗದ ಮೆದೆಹಳ್ಳಿ ಬ್ರಿಡ್ಜ್ ಬಳಿ ಅಕ್ರಮವಾಗಿ ಗೋವುಗಳನ್ನ ಸಾಗಿಸುತ್ತಿದ್ದ ವಾಹನವನ್ನ ವಷಕ್ಕೆ ಪಡೆಯಲಾಗಿದೆ. ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಸಿನಿಮೀಯ ರೀತಿಯಲ್ಲಿ ಟಾಟಾ ಏಸ್ ವಾಹನವನ್ನ ಅಡ್ಡಗಟ್ಟಿ ಆರು ಗೋವುಗಳನ್ನ ಸಾಗಿಸುತ್ತಿದ್ದ ವಾಹನವನ್ನ ತಡೆದು ನಿಲ್ಲಿಸಿದ್ದು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಖಚಿತ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷದ್ ನ ಕಾರ್ಯಕರ್ತರು ಚಿತ್ರದುರ್ಗ ನಗರದ ಮೆದೆಹಳ್ಳಿ ಬ್ರಿಡ್ಜ್ ಬಳಿ ಸುಮಾರು ಆರು ಹಸುಗಳನ್ನ ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿಯನ್ನ ಪಡೆದು ವಾಹನವನ್ನ ಚೇಸ್ ಮಾಡಿ ತಡೆದಿದ್ದಾರೆ