ಕಲಬುರಗಿ : 2008 ರಲ್ಲಿ ನಾಗೇಂದ್ರ ಎಂಬಾತನ ಕೊಲೆಗೆ ಪ್ರತಿಕಾರವಾಗಿ ಸೀತನೂರು ಗ್ರಾಮದಲ್ಲಿಂದು ಶಿವರರಾಯ್ ಮಾಲೀಪಾಟೀಲ್ ಕೊಲೆಯಾಗಿದೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.. ಆ31 ರಂದು ಮಧ್ಯಾನ 1 ಗಂಟೆಗೆ ಗ್ರಾಮದಲ್ಲಿ ಮಾತನಾಡಿದ ಅವರು, ನಾಗೇಂದ್ರ ಅತ್ತಿಗೆ ಜೊತೆ ಶಿವರಾಯ್ ಮಾಲೀಪಾಟೀಲ್ ಅನೈತಿಕ ಸಂಬಂಧ ಹೊಂದಿದ್ದನು.. ಸಂಬಂಧಕ್ಕೆ ಅಡ್ಡಿಯಾಗಿದ್ದ ನಾಗೇಂದ್ರನನ್ನ ಶಿವರಾಯ್ ಕೊಲೆ ಮಾಡಿದ್ದನು. ಇದೀಗ ತಂದೆಯ ಕೊಲೆಗೆ ಮಗ ಲಕ್ಷ್ಮೀಕಾಂತ್ ಪ್ರತಿಕಾರ ತೀರಿಸಿಕೊಂಡಿದ್ದಾನೆಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.