ನಾಡ ಹಬ್ಬ ದಸರಾ ಉತ್ಸವ ಹಿನ್ನೆಲೆ ನಾಯಕನಹಟ್ಟಿ ಸಮೀಪದ ದೊರೆಗಳ ಮಟ್ಟಿಗೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಭೇಟಿ ನೀಡಿದ್ದರು. ಹಟ್ಟಿ ಮಲ್ಲಪ್ಪ ನಾಯಕನ ನೆನಪಿಗಾಗಿ ದಸರಾ ಹಬ್ಬ ಹಿನ್ನೆಲೆ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಸ್ಥಳ ವೀಕ್ಷಣೆ ಕೂಡಾ ಮಾಡಿದರು. ಇದೇ ಸ್ಥಳದಲ್ಲಿ ನಾಳೆ ಕುಸ್ತಿ ಪಂಧ್ಯಾವಳಿ ಕೂಡಾ ಆಯೋಜನೆ ಮಾಡಲಾಗಿದೆ. ಈ ವೇಳೆ ಹಟ್ಟಿ ಮಲ್ಲಪ್ಪ ನಾಯಕನ ಸ್ಮಾರಕಕ್ಕೆ ಭೇಟಿ ನೀಡಿದ ಅವರು ಪೂಜೆ ಕೂಡಾ ಸಲ್ಲಿಕೆ ಮಾಡಿದರು. ಈ ವೇಳೆ ಮಾತ್ನಾಡಿದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ ಹಟ್ಟಿ ಮಲ್ಲಪ್ಪ ನಾಯಕ ಈ ಭಾಗದ ಐತಿಹಾಸಿಕ ವ್ಯಕ್ತಿ, ಅವರ ನೆನಪಿನಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಕರೆ ನೀಡಿದರು.