ಅಡುಗೆ ಸಿಲಿಂಡರ್ ಲೀಕ್ ಆಗಿ, ಮನೆ ಒಳಗೆ ಬೆಂಕಿ ಆವರಿಸಿ ಹೊತ್ತಿ ಉರಿದಿದೆ. ವಿಜಯಪುರ ನಗರದ ಆಶ್ರಮ ರಸ್ತೆಯ ಲೇಡಿಸ್ ಹಾಸ್ಟೇಲ್ ಬಳಿ ಘಟನೆ ನಡೆದಿದೆ. ಬಿ ಎಸ್ ಬಿರಾದಾರ್ ಎಂಬುವರ ಮನೆಯಲ್ಲಿ ಅವಘಡ ಸಂಭವಿಸಿದೆ ಅದೃಷ್ಟವಶಾತ್ ಮನೆಯವರು ಪಾರಾಗಿದ್ದಾರೆ. ಅಡುಗೆ ಸಿಲೆಂಡರ್‌ನಲ್ಲಿನ ಗ್ಯಾಸ್ ಲೀಕ್ ಆಗಿ ಅವಘಡ ನಡೆದಿದೆ. ಏಕಾಏಕಿ ಬೆಂಕಿ ಹೊತ್ತುಕೊಂಡ ಹಿನ್ನಲೆ ಮನೆಯಿಂದ ಕುಟುಂಬದ ಸದಸ್ಯರು ಓಡಿ ಹೊರ ಬಂದಿದ್ದಾರೆ. ಯಾವುದೇ ಜೀವಹಾನಿ ಆಗಿಲ್ಲ...