ಖಾಸಗಿ ಕ್ಲಿನಿಕ್ ಗೆ ಹಾಕಿದ್ದ ಸೆಟ್ರಸ್‌ನ್ನು ಮುರಿದು ಕಳ್ಳರು ನಗದು ಹಣ ಹಾಗೂ ಕ್ಲಿನಿಕ್ ನಲ್ಲಿದ್ದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಹಾನಗಲ್ ತಾಲೂಕು ಯಳವಟ್ಟಿಯ ವೀರಣ್ಣ ಕ್ಯಾಸನಕೇರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಕಳ್ಳರು ಖಾಸಗಿ ಕ್ಲಿನಿಕ್ ನ ವಿವಿಧ ಕೌಂಟರ್ ಗಳಲ್ಲಿದ್ದ 60 ಸಾವಿರ ನಗದು ಹಣ ಹಾಗೂ ಆಂಡ್ರಾಯ್ಡ್ ಮೊಬೈಲ್, ಸಿಸಿಟಿವಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.