ಮದ್ದೂರು ಪಟ್ಟಣದಲ್ಲಿ ಅದ್ದೂರಿ ಸಾಮೂಹಿಕ ಗಣಪತಿ ವಿಸರ್ಜನೆ ಅಂಗವಾಗಿ 14 ಗಣಪತಿಗಳನ್ನು ಸಾಮೂಹಿಕವಾಗಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಬುಧವಾರ ಸಂಜೆ 6 ಗಂಟೆಯಲ್ಲಿ ಬೃಹತ್ ಮೆರವಣಿಗೆಗೆ ಮೂಲಕ ಹಿಂದೂಗಳ ಶಕ್ತಿ ಪ್ರದರ್ಶನ ನಡೆಯಿತು. ಐತಿಹಾಸಿಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದನ್ನು ಖಂಡಿಸಿ 3.5 ಕಿಮೀ ನಡೆದ ಬೃಹತ್ ಮೆರವಣಿಗೆ ಸತತ ಐದು ಗಂಟೆಗಳ ಸಾಗಿ ಗಮನ ಸೆಳೆಯಿತು ಮೆರವಣಿಗೆ ಉದ್ದಕ್ಕೂ ರಾರಾಜಿಸಿದ ಕೇಸರಿ ಧ್ವಜಗಳು, ಡಿಜೆ ಸದ್ದಿಗೆ ಜನರು ಕುಣಿದು ಕುಪ್ಪಳಿಸಿದರು. ಶಿಂಷಾ ನದಿಯ ತಟದಲ್ಲಿ ಮುಕ್ತಾಯಗೊಂಡ ಮೆರವಣಿಗೆ ಬಳಿಕ 14 ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.