ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ಶ್ರೀ ಕಲ್ಲೇಶ್ವರ ದೇವಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಶಿವರಾಮ್ ಹೆಬ್ಬಾರ್ ಅವರು ಬುಧವಾರ ಸಂಜೆ 4ಕ್ಕೆ ನೇರವೇರಿಸುವ ಮೂಲಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಪ್ರಮುಖರಾದ ಎಚ್.ಎಮ್ ನಾಯ್ಕ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿಗೌಡ ಪಾಟೀಲ್, ಜ್ಞಾನೇಶ್ವರ ಗುಡಿಯಾಳ, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಆರ್.ಆರ್.ಹಿರೇಮಠ, ಸ್ಥಳೀಯ ಮುಖಂಡರಾದ ಗುಡ್ಡಪ್ಪ ಕಾತೂರ, ಎಮ್.ಪಿ.ಕುಸೂರ ಉಪಸ್ಥಿತರಿದ್ದರು.