ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗುಡುರ ಗ್ರಾಮದ ಬಸ್ ನಿಲ್ದಾಣದಲ್ಲಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡಿದ ಸ್ಥಿತಿ ಕಂಡು ಬಂದಿದೆ. ಶನಿವಾರ ಬೆಳಗ್ಗೆ ವಿದ್ಯಾರ್ಥಿಗಳ ಪರದಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗುತ್ತಿರುವಂಥದ್ದು. ಬೀರನಕಲ್ ತಾಂಡಾ ಕಡೆಗೆ ಹೊರಟಿದ್ದ ಬಸ್ ಹತ್ತಲು ವಿದ್ಯಾರ್ಥಿಗಳು ಪರದಾಟವನ್ನು ನಡೆಸಿದ್ದು ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನನ್ನು ಬಸ್ ನಿರ್ವಾಹಕ ಕೆಳಗೆ ತಳ್ಳಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ಶರಣರೆಡ್ಡಿ ಹತ್ತಿಗೂಡೂರ ಆಗ್ರಹಿಸಿದ್ದಾರೆ. ಬಸ್ ನಲ್ಲಿ ಸ್ಥಳಾವಕಾಶ ಇಲ್ಲದ್ದರಿಂದ ಅನೇಕ ವಿದ್ಯಾರ್ಥಿಗಳು ಬಾಗಿಲಲ್ಲಿಯೆ ನಿಂತು ಪ್ರಯಾಣ ಬೆಳೆಸಿರುವುದು ಕೂಡ ಕಂಡುಬಂದಿದೆ.