ಸ್ಪೀಕರ್ ಯು.ಟಿ ಖಾದರ್ ಅವರು ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ 11ನೇ CPI ಭಾರತ ವಲಯದ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದೆ, ರಾಷ್ಟೀಯ ಮಟ್ಟದ CPI ಉದ್ಘಾಟನಾ ಕಾರ್ಯಕ್ರಮ ಇದಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆಯುತ್ತಿರೋದು. ನಾಳೆ ತಾಜ್ ವೆಸ್ಟ್ ಎಂಡ್ ನಲ್ಲಿ ಕಾರ್ಯಕ್ರಮ ನಡೆಯುತ್ತೆ. ಸಂಪೂರ್ಣವಾದ ಚಿಂತನ ಮಂಥನ ಕಾರ್ಯಕ್ರಮ ಇದು. ಜನರ ಅಪೇಕ್ಷೆ ಏನಿದೆ ಅದರ ವಿಚಾರ ಚರ್ಚೆ ಮಾಡ್ತೀವಿ. ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಚರ್ಚೆ. ದೇಶದ ಎಲ್ಲಾ ಸ್ಪೀಕರ್ ಗಳು ಕಾರ್ಯಕ್ರಮದಲ್ಲಿ ಇರ್ತಾರೆ ಎಂದರು.