ಗೌರಿ ಗಣೇಶ ಹಬ್ಬದ ಅಂಗವಾಗಿ ಹೂವು ಹಣ್ಣು ಬಾಳೆಕಂದು ಸೌತೆಕಾಯಿ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ಜೋರಾಗಿದ್ದು. ವಸ್ತುಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರು ಬೆಲೆ ಕೇಳಿ ಶಾಕ್ ಆಗಿದ್ದರು. ಚಿಕ್ಕಮಗಳೂರು ನಗರದ ವಿವಿಧ ರಸ್ತೆಗಳಲ್ಲಿ ಸೋಮವಾರ ವ್ಯಾಪಾರ ವ್ಯವಹಾರ ಜೋರಾಗಿ ಸಾಗಿದ್ದು ಬೆಲೆ ಏರಿಕೆಯ ನಡುವೆಯೂ ಕೂಡ ಜನ ವಸ್ತುಗಳನ್ನ ಕೊಳ್ಳಲು ಮುಗಿಬಿದ್ದರು.