ಜೆಜೆಎಂ ಕಾಮಗಾರಿಯಲ್ಲಿ ಬಾಲ ಕಾರ್ಮಿಕರ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಾಮಗಾರಿ ತರಾತುರಿಯಲ್ಲಿ ಮುಗಿಸಲು ಬಣ್ಣ ಬಳಿಯಲು ಬಾಲ ಕಾರ್ಮಿಕರ ಬಳಕೆಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಮಾಡಲಾಗಿದೆ. ನೀರಿನ ನಲ್ಲಿ ಕಟ್ಟೆಗೆ ಬಣ್ಣ ಬಳಿಯಲು ಬಾಲ ಕಾರ್ಮಿಕರ ಬಳಕೆ ಮಾಡಲಾಗಿದೆ. ಸೆಪ್ಟೆಂಬರ್ 8 ರಂದು ನಡೆದ ಗ್ರಾಮ ಸಭೆಯಲ್ಲಿ ಜೆಜೆಎಂ ಕಾಮಗಾರಿ ಹಸ್ತಾಂತರಿಸಲು ವಿರೋಧ ವ್ಯಕ್ತವಾಗಿದೆ. ತನಿಖೆಗೆ ಒತ್ತಾಯಿಸಿದ್ದಾರೆ