ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕ್ಯಾತನಹಟ್ಟಿ ಗ್ರಾಮದಲ್ಲಿ ರಸ್ತೆಗಳು ಸ್ವಚ್ಛತೆ ಇಲ್ಲದ ಕುರಿತು ಎರಡು ದಿನದ ಹಿಂದೆ ಪಬ್ಲಿಕ್ ಯಾಪ್ ನಲ್ಲಿ ವರದಿ ಬಿತ್ತರಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಆಡಳಿತ ಹಾಗೂ ಪಂಚಾಯತ್ ಇಲಾಖೆ ಭಾನುವಾರ ಮಧ್ಯಾನ ಗ್ರಾಮದಲ್ಲಿನ ರಸ್ತೆಗಳನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛಗೊಳಿಸಲಾಗಿದ್ದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಕ್ಯಾಪ್ಟನ್ ಹಟ್ಟಿ ಗ್ರಾಮದ ಜನರು ಪಬ್ಲಿಕ್ ಅಪ ವರದಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಗ್ರಾಮದಲ್ಲಿನ ಎಲ್ಲ ರಸ್ತೆಗಳು ಸ್ವಚ್ಛಗೊಳಿಸುತ್ತಿರುವ ಕಾರಣ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.