ವಿಪರೀತ ಮಳೆಯಿಂದಾಗಿ ಹತ್ತಿ ಬೆಳೆ ನಾಶ ಯಾದಗಿರಿ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಹಾಪುರ ತಾಲೂಕಿನ ಮುಡಗೋಳ ಗ್ರಾಮದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದ್ದು ಸದ್ಯ ರೈತ ಬೆಳೆದ ನಿಂತಿರುವ ಹತ್ತಿ ಗಿಡಗಳನ್ನು ಕಿತ್ತಿಹಾಕಿದ್ದಾನೆ. ಸಾಲ ಸೂಲ ಮಾಡಿ ರೈತ ಹತ್ತಿ ಬೆಳೆಯನ್ನು ಬೆಳೆದಿದ್ದು ಸದ್ಯ ವಿಪರೀತ ಮಳೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದ್ದು ಇದರಿಂದಾಗಿ ರೈತನ ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸರ್ಕಾರ ರೈತರ ಕಷ್ಟಕ್ಕೆ ಧಾವಿಸುವಂತೆ ಒತ್ತಾಯಿಸಿದ್ದಾರೆ ಸದ್ಯ ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರ ಭಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಕೊಳೆತು ಹೋಗಿದ್ದು ರೈತರು ಸಂಕಷ್ಟ ಗೀಡಾಗಿದ್ದಾರೆ