ಉಪಾಧ್ಯಕ್ಷ ರೂಪ ನವೀನ್ ಮಾತನಾಡಿ ಶಿಡ್ಲಘಟ್ಟ ನಗರವು ಯಾವಾಗಲೂ ಶಾಂತಿ, ಸೌಹಾರ್ದ ಹಾಗೂ ಸಹಬಾಳ್ವೆಯ ಕೇಂದ್ರವಾಗಿರಬೇಕು ಎಂಬುದೇ ನಮ್ಮ ಆಶಯ. ಇಂದಿನ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಯುವಕರು ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ. ಹಬ್ಬವನ್ನು ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಹಂಚಿಕೊಳ್ಳುವುದು ನಿಜವಾದ ಮಾನವೀಯತೆ. ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ, ಶಿಡ್ಲಘಟ್ಟದಲ್ಲಿ ಸೌಹಾರ್ದತೆಯ ಬೆಳಕು ಇನ್ನಷ್ಟು ಬಲವಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ವೇಣುಗೋಪಾಲ್, ನಗರಸಭಾ ಅಧ್ಯಕ್ಷ ಇದ್ದರು