ಪಿಒಪಿ ಗಣಪತಿ ಹಾವಳಿಯಿಂದಾಗಿ ಮಣ್ಣಿನ ಗಣಪತಿ ಮೂರ್ತಿ ತಯಾರಕರು ಕಂಗಲಾಗಿದ್ದಾರೆಂದು ನಗರದಲ್ಲಿ ಗಣಪತಿ ತಯಾರಕರಾದ ಅಮಚವಾಡಿ ಸಿದ್ದಪ್ಪಾಜಿ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಪಿಒಪಿ ಗಣಪತಿ ಕೇವಲ ಆದೇಶದಲ್ಲಷ್ಟೇ ನಿಷೇಧವಾಗಿದ್ದು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಪಿಒಪಿ ಗಣಪತಿಗಳಿಂದ ಮಣ್ಣಿನಲ್ಲಿ ತಯಾರಿಸುವ ಗಣಪತಿಯನ್ನು ಕೇಳುವವರಿಲ್ಲ, ನಮ್ಮ ಇಡೀ ಕುಟುಂಬ ಮೂರ್ತಿ ತಯಾರಿಕೆ ಮಾಡಲಿದ್ದು ಲಾಭದ ಮಾತಿರಲಿ ಈ ಬಾರಿ ಹಾಕಿದ್ದ ಬಂಡವಾಳವೂ ಬರಲಿಲ್ಲ ಎಂದು ಅಳಲು ತೋಡಿಕೊಂಡರು.