ಶವಸಂಸ್ಕಾರ ಮಾಡಲು ಸ್ಮಶಾನ ಭೂಮಿ ಇಲ್ಲದೆ ಭದ್ರಾ ಹಿನ್ನೀರಿನಲ್ಲಿರುವ ನುಡು ಗಡ್ಡೆಯಲ್ಲಿ ತೆಪ್ಪದ ಮೂಲಕ ಶವ ಸಾಗಿಸಿ ಅಂತ್ಯ ಸಂಸ್ಕಾರ ಮಾಡಬೇಕಾದ ದುಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಎಂಆರ್ ಪುರ ತಾಲೂಕಿನ ರಾವೂರು ಗ್ರಾಮದಲ್ಲಿ ನಡೆದಿದೆ. ಕಳೆದ ವಾರವು ಕೂಡ ರಾಹುರು ಗ್ರಾಮದ ವ್ಯಕ್ತಿ ಒಬ್ಬರು ಮೃತಪಟ್ಟಿದ್ದು ತೆಪ್ಪದ ಮೂಲಕ ಶವವನ್ನು ಸಾಗಿಸಿ ನಡು ಗಡ್ಡೆಯಲ್ಲಿ ಜವ ಸಂಸ್ಕಾರ ಮಾಡಿದರು ಇಂದು 55 ವರ್ಷದ ಅಣ್ಣಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದು, ಅಪಾಯದ ಮಟ್ಟ ನೀಡಿ ಹರಿಯುತ್ತಿರುವ ಭದ್ರ ಹಿನ್ನೀರಿನಲ್ಲಿ ಜವ ಸಂಸ್ಕಾರ ಮಾಡುತ್ತಿದ್ದು ಜಿಲ್ಲಾಡಳಿತದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.