ಎಪಿಕ್ ಫೈಲ್ ಡೌನ್ ಲೋಡ್ ಮಾಡಿ ಆನ್'ಲೈನ್'ನಲ್ಲಿ ವ್ಯಕ್ತಿಯೊಬ್ಬರು ₹ 14.47 ಲಕ್ಷ ಹಣ ಕಳೆದುಕೊಂಡ ಘಟನೆ ಮೊಗರಹಳ್ಳಿಯಲ್ಲಿ ಜರುಗಿದೆ. ಮೊಗರಹಳ್ಳಿಯ ರೇವಣ್ಣ ಬಿ ಹಣ ಕಳೆದುಕೊಂಡ ವ್ಯಕ್ತಿ. ಸೆ.4ರಂದು ವಾಟ್ಸಾಫ್'ಗೆ ಅಪರಿಚಿತ ಮೊಬೈಲ್ ಸಂಖ್ಯೆ 9845940116 ನಿಂದ ಒಂದು ಮೆಸೇಜ್ ಬಂದಿದೆ. ಅದರಲ್ಲಿ ಆರ್ ಟಿ ಒ ಚಲನ್ ಆಪ್'ಡೇಟ್ ಮತ್ತು ಎಪಿಕ್ ಫೈಲ್ ಎಂದು ಲಿಂಕ್ ಬಂದಿದ್ದು, ಲಿಂಕ್ ಡೌನ್'ಲೋಡ್ ಮಾಡಿದ ಬಳಿಕ ಖಾತೆಯಲ್ಲಿ ಎಫ್ ಡಿ ಇಟ್ಟಿದ್ದ 14 ಲಕ್ಷ ರೂ ಹಣ ಹಾಗೂ ವ್ಯವಹಾರಕ್ಕೆಂದು ಇಟ್ಟಿದ್ದ 71,957 ರೂ. ಪೈಕಿ 47,999 ರೂ ಸೇರಿ ಒಟ್ಟು 14,47999 ರೂ ಹಣವನ್ನು ಹಂತ ಹಂತವಾಗಿ ಕಡಿತಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಸಿಇಎನ್ ಅಪರಾಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.