ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಪೀಣ್ಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ನಾವು ಧರ್ಮಸ್ಥಳ ವಿಚಾರ ಆರಂಭವಾದಾಗಿನಿಂದ ಇದರಲ್ಲಿ ಷಡ್ಯಂತ್ರ ಇದೆ ಅಂತ ಹೇಳಿದೆವು. ಸರ್ಕಾರ ಬರೀ ಬುರುಡೆ ಬಿಟ್ಟರು. ದೇಶದ ರಾಜ್ಯದ ಜನ ನೋವನ್ನ ಅನುಭವಿಸಿದ್ರು. ಧರ್ಮಸ್ಥಳದ ಬಗ್ಗೆ ಇದ್ದ ಭಕ್ತಿ ಬಾವನೆ ಹಾಳು ಮಾಡಿದ್ರು. ಸಿಎಂಗೆ ದಿನನಿತ್ಯ SIT ರಚನೆ ಮಾಡುವಂತೆ ಸಾವಿರಾರು ಪತ್ರ ಬರ್ತವೆ. ಇವರು ಮೊದಲು SIT ಮಾಡಿದ್ದೇ ತಪ್ಪು. ದೂರು ಕೊಟ್ಟವನ ಸತ್ಯ ಏನು ಅಂತ ಮೊದಲೇ ತಿಳಿಯಬೇಕಿತ್ತು. ಮುಸುಕುದಾರಿಯನ್ನ ಇನ್ನೂ ಏನಕ್ಕೆ ಇಟ್ಟುಕೊಂಡಿದ್ದೀರಿ.? ಅವನ ಹೆಂಡತಿಯೇ ಬಂದು ಅವನ ಬಗ್ಗೆ ಆರೋಪ ಮಾಡಿದ್ದಾಳೆ.