ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿ ಕರಗೂರು ಗ್ರಾಮದಲ್ಲಿ ಆಯತಪ್ಪಿ ಹೊಳೆಗೆ ಬಿದ್ದು ರೈತ ಪ್ರಕಾಶ್ (65) ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ರೈತ ಪ್ರಕಾಶ್ ದನಕರುಗಳನ್ನು ಕಟ್ಟಲು ಹೋಗುತ್ತಿದ್ದ ವೇಳೆ ಕಾಲು ಜಾರಿ ಕರಗೂರು ಹೊಳೆಗೆ ಬಿದ್ದಿದ್ದಾರೆ.ಮೊದಲೇ ಜೋರು ಮಳೆಯಿಂದ ತುಂಬಿದ್ದ ನೀರಿನಲ್ಲಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.ಸಳಕ್ಕೆ ಯಸಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.