ನವಜಾತ ಶಿಶುವನ್ನು ತಾಯಿಯೊಬ್ಬಳು ಪೊದೆಯಲ್ಲಿ ಬಿಸಾಡಿಹೋಗಿರುವ ಅಮಾನುಷ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.ಆಗ ತಾನೇ ಜನಿಸಿದ ಮಗುವನ್ನು ಟವಲ್ , ಎರಡು ಗೋಣಿಚೀಲದಲ್ಲಿ ಸುತ್ತಿ ಬಿಸಾಡಿದ್ದಾರೆ.ಮಗು ಅಳುವುದನ್ನು ನೋಡಿದ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಮಂಗಳವಾರ ಮಗುವನ್ನು ದುರುಳರು ಬಿಸಾಡಿದ ಹೋಗಿದ್ದಾರೆ. ಪೋಲೀಸರ ಸಹಾಯದಿಂದ ಶ್ರೀನಿವಾಸ್ಎಂಬುವವರು ಮಾಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನವಜಾತ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಮಕ್ಕಳ ಐಸಿಯುನಲ್ಲಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.