ಬಾಗೇಪಲ್ಲಿ: ನದಿ, ನಾಲೆಗಳು ಇಲ್ಲದ ಬಯಲುಸೀಮೆ ತಾಲ್ಲೂಕು ಬಾಗೇಪಲ್ಲಿಯಲ್ಲಿ ನೀರಿನ ಕೊರತೆಯ ನಡುವೆ ರೈತರುಬಟನ್ ರೋಜಾ, ಚೆಂಡುಮಲ್ಲಿಗೆ, ಸೇವಂತಿಗೆಯಂತಹ ವಾಣಿಜ್ಯ ಹೂವಿನ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕಲಾಭ ಗಳಿಸಿದ್ದಾರೆ.ಮುಂಗಾರು, ಹಿಂಗಾರು, ವಾಯುಭಾರ ಕುಸಿತದಿಂದ ಉಂಟಾಗುವ ಮಳೆಗಳಿಂದ ತರಕಾರಿ ಹಾಗೂ ಹೂವಿನ ಬೆಳೆಬೆಳೆಯುವುದು ಕಷ್ಟ. ಸರಿಯಾದ ಸಮಯಕ್ಕೆ ಮಳೆ ಬರದಿದ್ದರೆ, ಹೂವಿನ ಸಸಿಗಳಿಗೆ ನೀರು ಹರಿಸಲುಸಾಧ್ಯವಾಗುವುದಿಲ್ಲ. ಇದರಿಂದ ನಷ್ಟವಾಗಲಿದೆ ಎಂದು ರೈತರು ಭಾವಿಸುತ್ತಾರೆ. ಆದರೆ ಹನಿ ನೀರಾವರಿ, ತುಂತುರನೀರಾವರಿ ಪದ್ಧತಿ, ಕೊಳವೆಬಾವಿಯಿಂದ ನೀರು ಬಳಕೆ ಮಾಡಿಕೊಂಡ ತಾಲ್ಲೂಕಿನ ಕೆಲವು ರೈತರು ಬಗೆ ಬಗೆ