ಜಿಲ್ಲೆಯಲ್ಲಿ ಸಹ ಶೇ.50 ರಷ್ಟು ನೀರಾವರಿ ದಕ್ಷಿಣಕ್ಕೆ ತುಂಗಭದ್ರೆ, ಉತ್ತರದ ತುದಿಯಲ್ಲಿ ಕೃಷ್ಣೆ, ಫಲವತ್ತಾದ ಭೂಮಿ, ಸಿಂಧನೂರು ವ್ಯಾಪ್ತಿಯಲ್ಲಿ 600 ಲಕ್ಷ ಹೆಕ್ಟೇರ್ ಭೂಮಿಯಿದೆ. ಇಲ್ಲೂ ಕೂಡ ಶೇ.50 ರಷ್ಟು ಭತ್ತದ ಭೂಮಿಯಾಗಿ ಪರಿವರ್ತನೆ ಆಗಿದೆ ನಿಜ, ಆದರೆ ಮೇಲೆ ಚೆನ್ನಾಗಿದೆ ಒಳಗೆ ಬೆತ್ತಲೆಯಾಗಿದೆ ಎಂದು ಕೊಲ್ಲಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಯವರು ವಿಷಾದ ವ್ಯಕ್ತಪಡಿಸಿದರು. ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾವಯವ ಸಿರಿಧಾನ್ಯ ಕೃಷಿ ಮತ್ತು ರೈತ ಸಮಾವೇಶ ಹಾಗೂ ಗೋ ಸಂರಕ್ಷಣೆ ಕುರಿತು ಅದ್ಬುತ ಉಪನ್ಯಾಸ ನೀಡಿದ ಅವರು, ಹೆಚ್ಚಿನ ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯ ಸತ್ವವನ್ನು ಕಳೆದುಕೊಳ್ಳುತ್ತಿದೆ. ಭೂಮಿ ಹಾಳಾಗದಂತೆ ರೈತರು ಶ್ರಮವ